ಶಾರ್ದೂಲವಿಕ್ರೀಡಿತ
	ನಾಲ್ಕು ಸಮಾನ ಪಾದಗಳುಳ್ಳ ವೃತ್ತ ಪದ್ಯಗಳ ಪೈಕಿ ಒಂದು. ಕಣ್ಗೊಪ್ಪಲ್ ಮಸಜಂಸತಂತಗಮುಮಾ ಶಾರ್ದೂಲವಿಕ್ರೀಡಿತಂ ಎಂಬುದು ಈ ಪದ್ಯದ ಸೂತ್ರ. ಪ್ರತಿ ಪಾದದಲ್ಲೂ ಹತ್ತೊಂಬತ್ತು ಅಕ್ಷರಗಳಿವೆ. ಪದ್ಯದ ಪ್ರತಿ ಪಾದವೂ ಮ, ಸ, ಜ, ಸ, ತ, ತ ಎಂಬ ಗಣಗಳಿಂದಲೂ ಒಂದು ಗುರುವಿನಿಂದಲೂ ಕೂಡಿರುವುದು. ಉದಾಹರಣೆಗೆ : 
ಇಂತೀಕಾವ್ಯಮನೊಲ್ದುಕೇಳ್ದವಿಭುದರ್‍ಮೈವೆರ್ಚಿಕೊಂಡಾಡೆಪೇ|
ಳ್ದೆಂತಾಮೊರ್ವನೆಸಾಂಬಶಂಭುಕೃಪೆಯಿಂದೇಕಾಬ್ದದೊಳ್‍ಪೂರ್ಣಮ||
			   (ನೋಡಿ- ಖ್ಯಾತ-ಕರ್ಣಾಟಕಗಳು)				
			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ